ಸಂಸ್ಥೆ

 

 

 

  • ಇತಿಹಾಸ

  • ಮುಖ್ಯಾಂಶಗಳು
  • ಆವೃತ್ತಿ ೨೦೨೨
  • ಚಿತ್ರಸಂಪುಟ
ಇತಿಹಾಸ

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು ಭಾರತದ ಅತ್ಯಂತ ಹೆಮ್ಮೆಯ ಪುತ್ರರ ಸ್ಮರಣೆಯನ್ನು ನೆನಪಿಸುತ್ತದೆ. ಶ್ರೀ ರಫಿ ಅಹ್ಮದ್ ಕಿದ್ವಾಯಿಯವರು ನಮ್ಮ ರಾಷ್ಟ್ರದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು. ನಂತರದಲ್ಲಿ, ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆಯ ಬೇರುಗಳನ್ನು ಗಟ್ಟಿಗೊಳಿಸಲು ಅವರು ಇತರೆ ರಾಷ್ಟ್ರೀಯ ನಾಯಕರೊಂದಿಗೆ ಭುಜಕ್ಕೆ ಭುಜವನ್ನು ನೀಡಿ ಕೆಲಸವನ್ನು ಮಾಡಿದವರು.
1957ರಲ್ಲಿ, ಬೆಂಗಳೂರಿನ ಪುರಪಿತೃಗಳು ಒಟ್ಟಾಗಿ ಸೇರಿ, ತಮ್ಮ ಪರಿಕಲ್ಪನೆಯ ಸಾಕಾರಕ್ಕಾಗಿ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಎಂಬ (ಕಿ.ಸ್ಮಾ.ಗಂ.ಸಂ.) ಒಂದು ಖಾಸಗಿ ಸಂಸ್ಥೆಯನ್ನು ಆರಂಭಿಸಿದ್ದರು. ನಂತರ, ಇದನ್ನು 1971ರಲ್ಲಿ ಕರ್ನಾಟಕ ಸರ್ಕಾರವು ಸ್ವಾಧೀನಪಡಿಸಿಕೊಂಡಿತು. ಅಂತಿಮವಾಗಿ, 1973ರ 26ರಂದು ಇದು ಒಂದು ಕ್ಯಾನ್ಸರ್ ಚಿಕಿತ್ಸಾ ಸಂಸ್ಥೆಯಾಗಿ ಉದ್ಘಾಟನೆಗೊಂಡಿತು. 1979ರ ಡಿಸೆಂಬರ್ 27ರಂದು ಹೊರಡಿಸಲಾದ ರಾಜ್ಯದ ರಾಜ್ಯಪಾಲರ ಆದೇಶದ ಪ್ರಕಾರ ಈ ಸಂಸ್ಥೆಯನ್ನು ಸರ್ಕಾರದ ಸ್ವಾಯತ್ತ ಸಂಸ್ಥೆಯನ್ನಾಗಿ ಪರಿವರ್ತಿಸಲಾಯಿತು. ಕರ್ನಾಟಕ ರಾಜ್ಯದಲ್ಲಿ ಗಂಥಿಶಾಸ್ತ್ರ ಕ್ಷೇತ್ರದ ಮುಂಚೂಣಿ ಮತ್ತು ಮಾದರೀ ಸಂಸ್ಥೆಯನ್ನಾಗಿ ಇದನ್ನು ರೂಪಿಸಲು ಉದ್ದೇಶಿಸಲಾಯಿತು. ಇದಕ್ಕಾಗಿ ರಾಜ್ಯ ಸರ್ಕಾರ, ಇತರ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಸಂಪನ್ಮೂಲಗಳನ್ನು ಮತ್ತು ಪರಿಣತಿಯನ್ನು ಕ್ರೋಢೀಕರಿಸಿ, ಅಭಿವೃದ್ಧಿ ಮತ್ತು ಬೆಳವಣಿಗೆಗೆ ಸಹಾಯಕವಾಗುವಂತೆ ಈ ಸಂಸ್ಥೆಯನ್ನು ಒಂದು ಸ್ವಾಯತ್ತ ಸಂಸ್ಥೆಯಾಗಿ ಪರಿವರ್ತಿಸಲಾಯಿತು. 1980ರ ಜನವರಿ 8ರಂದು `ಕಿದ್ವಾಯಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ (ಏಒIಔ)’ ಎಂಬ ಹೆಸರಿನ ಸ್ವತಂತ್ರ ಸಂಸ್ಥೆಯಾಗಿ ನೋಂದಾಯಿಸಲ್ಪಟ್ಟಿತು. ಸಂಸ್ಥೆಯ ಮೊದಲ ನಿರ್ದೇಶಕ ಡಾ.ಎಂ.ಕೃಷ್ಣಭಾರ್ಗವ, 1980ರ ಜನವರಿ 23ರಂದು, ಈ ಸ್ವಾಯತ್ತ ಸಂಸ್ಥೆ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು. ಸಂಸ್ಥೆಯ ಇತಿಹಾಸದಲ್ಲಿ 1980ರ ಏಪ್ರಿಲ್ 21, ಸೋಮವಾರ, ಒಂದು ಸ್ಮರಣಾರ್ಹ ದಿನವಾಗಿತ್ತು. ಅಂದು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಮಾನ್ಯ ಶ್ರೀ ಬಿ.ಶಂಕರಾನಂದರವರು ಔಪಚಾರಿಕವಾಗಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯನ್ನು ಉದ್ಘಾಟಿಸಿದರು.
 

ಮುಖ್ಯಾಂಶಗಳು

 

ಬೆಂಗಳೂರಿನ ಮೇಯರ್ 1957ರಲ್ಲಿ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯನ್ನು ಆರಂಭಿಸಿದರು. ಅದೊಂದು ಸಣ್ಣ ಕ್ಯಾನ್ಸರ್ ಕೇಂದ್ರವಾಗಿ ಸ್ಥಾಪಿಸಲ್ಪಟ್ಟಿತು. ಕರ್ನಾಟಕ ಸರ್ಕಾರವು ಆ ಸೊಸೈಟಿಯನ್ನು 1970ರಲ್ಲಿ ವಹಿಸಿಕೊಂಡಿತು.  ಸಂಘಗಳ ನೋಂದಣಿ ಕಾಯ್ದೆ ಅಡಿಯಲ್ಲಿ ನೋಂದಾಯಿತ ಸಂಸ್ಥೆಯಾದ ಇದು 1980ರಲ್ಲಿ ಕರ್ನಾಟಕ ಸರ್ಕಾರದ ಸ್ವಾಯತ್ತ ಸಂಸ್ಥೆಯಾಯಿತು ಮತ್ತು ಅದೇ ವರ್ಷದಲ್ಲಿ ಭಾರತ ಸರ್ಕಾರದಿಂದ  ಪ್ರಾದೇಶಿಕ ಕ್ಯಾನ್ಸರ್ ಕೇಂದ್ರವಾಗಿ ಮಾನ್ಯತೆ ಗಳಿಸಿತು.  ಪ್ರಸ್ತುತ, ನಮ್ಮ ದೇಶದಲ್ಲಿ ಕಾರ್ಯನಿರತವಾಗಿರುವ 27 ಪ್ರಾದೇಶಿಕ ಕ್ಯಾನ್ಸರ್ ಕೇಂದ್ರಗಳಲ್ಲಿ ಇದೂ ಸಹ ಒಂದಾಗಿದೆ.  ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯು, ಕ್ಯಾನ್ಸರ್ ವಿರುದ್ಧದ ಅಂತಾರಾಷ್ಟ್ರೀಯ ಒಕ್ಕೂಟದ ಸದಸ್ಯ ಸಂಸ್ಥೆಯಾಗಿದೆ.  ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯನ್ನು ವಿಶ್ವ ಆರೋಗ್ಯ ಸಂಸ್ಥೆಯು  ಅತ್ಯುತ್ಕೃಷ್ಟ ಸಂಸ್ಥೆ (ಇನ್ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್) ಎಂದು ಗುರುತಿಸಿ ಮಾನ್ಯತೆ ನೀಡಿದೆ.

ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯು 650 ಹಾಸಿಗೆಯುಳ್ಳ ಸಂಸ್ಥೆಯಾಗಿದ್ದು, ವರ್ಷಕ್ಕೆ ಸುಮಾರು 3 ಲಕ್ಷ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾ ಬಂದಿದೆ. ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯು 24 ಎಕರೆ ಪ್ರದೇಶದಲ್ಲಿ ವಿಸ್ತರಿಸಿದೆ.
 
 
 
 
 

ತ್ವರಿತ ಲಿಂಕ್ಗಳು

ಕೃತಿಸ್ವಾಮ್ಯ @ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ, ಬೆಂಗಳೂರು , ಭಾರತ