ಆಡಳಿತಗಾರರು

  • ನಿರ್ದೇಶಕರು ಹಾಗೂ ಪ್ರಾಂಶುಪಾಲರು
  • ಮುಖ್ಯ ಆಡಳಿತಾಧಿಕಾರಿ
  • ಹಣಕಾಸು ಸಲಹೆಗಾರರು
  • ವೈದ್ಯಕೀಯ ಅಧೀಕ್ಷಕರುು
  • ನಿವಾಸೀ ವೈದ್ಯಾಧಿಕಾರಿು

ನಿರ್ದೇಶಕರು ಹಾಗೂ ಪ್ರಾಂಶುಪಾಲರ ಸಂದೇಶ

ಕ್ಯಾನ್ಸರ್ ರೋಗಿಗಳ ಪ್ರಯೋಜನಕ್ಕಾಗಿ ಮತ್ತು ಕ್ಯಾನ್ಸರ್ ನಿರ್ಮೂಲನೆಗಾಗಿ ಪರಿಶ್ರಮಿಸಲು ನಮ್ಮೊಂದಿಗೆ ಕೈಜೋಡಿಸಬಯಸುವವರಿಗಾಗಿ ನಿರ್ಮಿಸಲಾಗಿರುವ ನಮ್ಮ ಈ ಅಂತರಜಾಲತಾಣಕ್ಕೆ ಮುನ್ನುಡಿಯನ್ನು ಬರೆಯುವುದು ನನಗೆ ಆನಂದಕರ ಮತ್ತು ನನ್ನ ಭಾಗ್ಯ ಎಂದೇ ಭಾವಿಸುತ್ತೇನೆ.


ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು (ಕೆಎಂಐಒ) ರೋಗಿಗಳಿಗೆ ಮತ್ತು ಅವರ ಸಂಬಂಧಿಗಳಿಗೆ ಈಗಾಗಲೇ ಒದಗಿಸುತ್ತಿರುವ ಸೌಲಭ್ಯಗಳ ಹಾಗೂ ಉದ್ದೇಶಿತ ಹೊಸ ಸೇವೆಗಳ ಸಮಗ್ರ ಮಾಹಿತಿಯನ್ನು ಈ ಜಾಲತಾಣದಲ್ಲಿ ಒದಗಿಸಲಾಗಿದೆ. ರೋಗಿಗಳಿಗೆ ಗುಣಮಟ್ಟದ ಮತ್ತು ಸುರಕ್ಷಿತ ಚಿಕಿತ್ಸೆ ನೀಡುವುದು, ಕ್ಯಾನ್ಸರ್ ನಿಯಂತ್ರಿಸುವುದು ಆರಂಭಿಕ ತಪಾಸಣೆ, ಕ್ಯಾನ್ಸರ್ ಬಾರದಂತೆ ತಡೆಗಟ್ಟುವುದು ಇವುಗಳಿಗೆ ನೀಡಲಾಗುತ್ತಿರುವ ವಿಶೇಷ ಒತ್ತನ್ನು ಕುರಿತಾದ ಮಾಹಿತಿಯನ್ನು ಈ ಜಾಲತಾಣಲ್ಲಿ ನೀಡಲಾಗಿದೆ. ಅಲ್ಲದೆ, ಕ್ಯಾನ್ಸರ್ ಕುರಿತ ಸಂಶೋಧನೆ, ಶಿಕ್ಷಣ ಮತ್ತು ಸಂಶೋಧನಾ ಚಟುವಟಿಕೆಗಳಿಗೆ ನೀಡಲಾಗಿರುವ ಮಹತ್ವವನ್ನು ಹಾಗೂ ಜಿಲ್ಲಾ ಮಟ್ಟದಲ್ಲಿ ಕ್ಯಾನ್ಸರ್ ಆರೈಕೆಗಾಗಿ ರೂಪಿಸುತ್ತಿರುವ ಸೇವಾಸೌಲಭ್ಯಗಳನ್ನು ಕುರಿತಾಗಿ ಇಲ್ಲಿ ತಿಳಿಸಲಾಗಿದೆ.


ವೈದ್ಯಕೀಯ ವಿಜ್ಞಾನವು ವೇಗವಾಗಿ ಮುಂದುವರೆಯುತ್ತಿದೆ. ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು ಪಾಶ್ಚಿಮಾತ್ಯ ದೇಶಗಳಿಗೆ ಸರಿಸಮನಾಗಿ ಅತ್ಯಾಧುನಿಕ ಕ್ಯಾನ್ಸರ್ ಆರೈಕೆ ಮತ್ತು ತಂತ್ರಜ್ಞಾನ ಆಧಾರಿತ ಸೇವೆಯನ್ನು ಒದಗಿಸುತ್ತಿದೆ. ಕ್ಯಾನ್ಸರ್ ಚಿಕಿತ್ಸೆಗಾಗಿ ಇತ್ತೀಚಿನ ಮತ್ತು ಆಧುನಿಕ ಸಲಕರಣೆಗಳನ್ನು ಕಿದ್ವಾಯಿ ಸಂಸ್ಥೆಯಲ್ಲಿ ಸಜ್ಜುಗೊಳಿಸುವ ಪ್ರಕ್ರಿಯೆಯಲ್ಲಿ ನಾವು ತೊಡಗಿಸಿಕೊಂಡಿದ್ದೇವೆ. ಆ ಮೂಲಕ ಕ್ಯಾನ್ಸರ್ ನಿರ್ಮೂಲನೆಗಾಗಿ ಕಠಿಣ ಪ್ರಯತ್ನ ಮಾಡುತ್ತಿದ್ದೇವೆ.


ಕ್ಯಾನ್ಸರ್ ರೋಗಿಗಳ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ, ನಾನು, ವಿಶೇಷವಾಗಿ ಯುವಕರು, ಸ್ವಯಂ-ಸೇವಕರು ಮತ್ತು ಅವರ ಸಂಘಟನೆಗಳು, ಸರ್ಕಾರೇತರ ಸಂಸ್ಥೆಗಳು, ಕಾರ್ಪೊರೇಟ್ ಮತ್ತು ಸರ್ಕಾರ ಮತ್ತು ಅರೆ-ಸರ್ಕಾರಿ ಸಂಸ್ಥೆಗಳಲ್ಲಿ ಮಾಡುವ ಮನವಿ ಏನೆಂದರೆ : ``ಕ್ಯಾನ್ಸರ್ ಬಗ್ಗೆ ಜನಜಾಗೃತಿ ಮೂಡಿಸುವಲ್ಲಿ, ಕ್ಯಾನ್ಸರ್ ತಡೆಗಟ್ಟುವಿಕೆಯಲ್ಲಿ ಮತ್ತು ಆರಂಭಿಕ ಪತ್ತೆಹಚ್ಚುವಿಕೆಯಲ್ಲಿ ದಯಮಾಡಿ ನಮ್ಮೊಂದಿಗೆ ಕೈಜೋಡಿಸಿ ಕಾರ್ಯನಿರ್ವಹಿಸುವಂತೆ ಕೋರುತ್ತೇನೆ. ಬನ್ನಿ, ಸಾಮಾಜಿಕ ಮತ್ತು ಆರ್ಥಿಕ ಮಿತಿಗಳನ್ನು ಮೀರಿ ನಮ್ಮ ವೈವಿಧ್ಯಮಯ ಜನಸಮುದಾಯದ ಆರೋಗ್ಯವನ್ನು ಕಾಪಾಡುವತ್ತ ಶ್ರಮಿಸೋಣ.


ತಮ್ಮ ಎಲ್ಲ ರೀತಿಯ ಸಹಾಯ, ಸಹಕಾರ ಮತ್ತು ಸಹಭಾಗಿತ್ವವನ್ನು ನಿರೀಕ್ಷಿಸುತ್ತಾ, ಇಂತಹ ಉದಾತ್ತ ಕಾರಣಕ್ಕಾಗಿ ಪರಿಶ್ರಮಿಸುತ್ತಿರುವ ನಮ್ಮೆಲ್ಲರಲ್ಲಿ ತಾವು ಇರಿಸಿರುವ ನಂಬುಗೆಯನ್ನು ಉಳಿಸಿಕೊಳ್ಳುವತ್ತ ನಾವು ಮತ್ತಷ್ಟು ಪರಿಶ್ರಮಿಸಲು ಪ್ರಯತ್ನಿಸುತ್ತೇವೆ.


ತುಂಬುಹೃದಯದ ಧನ್ಯವಾದಗಳೊಂದಿಗೆ,


ಡಾ.ಸಿ.ರಾಮಚಂದ್ರ


ನಿರ್ದೇಶಕರು

ತ್ವರಿತ ಲಿಂಕ್ಗಳು

ಕೃತಿಸ್ವಾಮ್ಯ @ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ, ಬೆಂಗಳೂರು , ಭಾರತ